ಹೊನ್ನಾಳಿ ತಿಪ್ಪೇರುದ್ರಸ್ವಾಮಿ ಇವರು ಫೆಬ್ರುವರಿ ೩ ೧೯೨೮ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಬಿ.ಎ ಹಾಗು ಎಂ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.ಹಾಸನದ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೬೨ರಲ್ಲಿ 'ಶರಣರ ಅನುಭಾವ ಸಾಹಿತ್ಯ' ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಢೆಯಲ್ಲಿ ಅಧ್ಯಾಪಕರಾಗಿ. ನಿರ್ದೇಶಕರಾಗಿ ಬಿ. ಆರ್. ಪ್ರಾಜೆಕ್ಟ್‌ನ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಕನ್ನಡ ಕಾವ್ಯ ಹಾಗೂ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದಾರೆ. == ಕೃತಿಗಳು == === ಐತಿಹಾಸಿಕ ಕಾದಂಬರಿಗಳು === ಪರಿಪೂರ್ಣದೆಡೆಗೆ (ಅಲ್ಲಮ ಪ್ರಭುವಿನ ಚರಿತ್ರೆ) ಕದಳಿಯ ಕರ್ಪೂರ (ಅಕ್ಕಮಹಾದೇವಿಯ ಚರಿತ್ರೆ) ಜ್ಯೋತಿ ಬೆಳಗಿತು (ನಿಜಗುಣ ಶಿವಯೋಗಿಗಳ ಚರಿತ್ರೆ) ನೆರಳಾಚೆಯ ಬದುಕು (ಸಿದ್ಧರಾಮನ ಚರಿತ್ರೆ) ಜಡದಲ್ಲಿ ಜಂಗಮ (ಷಣ್ಮುಖ ಶಿವಯೋಗಿಯ ಚರಿತ್ರೆ) === ಕವನ ಸಂಕಲನ === ತಪೋರಂಗ === ಕಥಾಸಂಕಲನ === ಸಾಹಿತ್ಯ ಚಿತ್ರಗಳು === ನಾಟಕ === ವಿಧಿಪಂಜರ === ವಿಮರ್ಶೆ/ವೈಚಾರಿಕ === ತೌಲನಿಕ ಕಾವ್ಯ ಮೀಮಾಂಸೆ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ == ಪುರಸ್ಕಾರ == ಇವರ "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. == ನಿಧನ == ಎಚ್.ತಿಪ್ಪೇರುದ್ರಸ್ವಾಮಿಯವರು ೨೮ ಅಕ್ಟೋಬರ ೧೯೯೪ ರಲ್ಲಿ ನಿಧರಾದರು. == ಉಲ್ಲೇಖಗಳು ==